ಸೆಪ್ಟೆಂಬರ್ ಬರುತ್ತಿದ್ದ ಹಾಗೆಯೇ ಹಬ್ಬದ ಸಂಭ್ರಮವೂ ಆರಂಭವಾಗುತ್ತದೆ. ಪ್ರತಿ ವರ್ಷವೂ ದಸರಾ ಹುಮ್ಮಸ್ಸನ್ನು ನೀಡುತ್ತದೆ ಹಾಗೂ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಕುಟುಂಬ ಹಾಗೂ ಸ್ನೇಹಿತರ ಜತೆ ಹಬ್ಬವನ್ನು ನಾವು ಆಚರಿಸುತ್ತೇವೆ. ಸುಂದರ ಸಂಜೆಯನ್ನು ಕಳೆಯಲು ನಾವು ಈಗಾಗಲೇ ಪ್ಲ್ಯಾನ್ ಮಾಡುತ್ತಿರುತ್ತೇವೆ. ದಸರಾಗೆ ಸಾಮಾನ್ಯವಾಗಿ ನನ್ನ ಪ್ಲ್ಯಾನಿಂಗ್ ಎರಡು ವಾರಗಳಿಗೂ ಮೊದಲು ಆರಂಭವಾಗುತ್ತದೆ. ಚೆಕ್‌ಲಿಸ್ಟ್ ಮಾಡುವುದು, ಶಾಪಿಂಗ್ ಮಾಡುವುದು, ಸಿಹಿ ತಿನಿಸುಗಳನ್ನು ಮಾಡುವುದು ಇತ್ಯಾದಿ ಆರಂಭವಾಗಿರುತ್ತದೆ ಆದರೆ ಇದೆಲ್ಲಕ್ಕಿಂತಲೂ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದೇ ಒಂದು ದೊಡ್ಡ ಸಂಗತಿ. ಕೊಳಕಾದ ಮನೆಯಲ್ಲಿ ಸ್ವೀಟ್ ಹಾಗೂ ಇತರ ತಿನಿಸುಗಳನ್ನು ಮಾಡುವುದನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ . ಸಾಮಾನ್ಯವಾಗಿ ಮನೆಯನ್ನು ನಾನು ನೀಟಾಗಿ ಇಟ್ಟುಕೊಂಡಿರುತ್ತೇನೆ. ಯಾಕೆಂದರೆ ಅದು ನನ್ನ ಕಾರ್ಯಕ್ಷೇತ್ರ ತಾನೆ ! ಅಷ್ಟೇ ಅಲ್ಲ, ನನ್ನ ಪ್ರಕಾರ ಒಂದು ಮನೆಯ ಅತ್ಯಂತ ಪ್ರಮುಖ ಸ್ಥಳವೇ ಅಡುಗೆ ಮನೆ. ಇದಕ್ಕೆ ನನಗೆ ನೆರವಾಗುವ ಸಂಗತಿಯೆಂದರೆ ಲಾಲ್ ಹಿಟ್. ಇದು ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳಲು ನೆರವಾಗುತ್ತದೆ. ಮನೆಯನ್ನು ಲಾಲ್ ಹಿಟ್‌ನಿಂದ ಸ್ವಚ್ಛಗೊಳಿಸುವುದು ನನ್ನ ಮಾಸಿಕ ಅಡುಗೆ ಮನೆ ಚೊಕ್ಕಟಗೊಳಿಸುವ ಒಂದು ಅಧ್ಯಾಯವೇ ಆಗಿದೆ.
ಜಿರಳೆಗಳು ತಮ್ಮ ತ್ಯಾಜ್ಯ ಹಾಗೂ ಜೊಲ್ಲಿನಿಂದ ಅಹಾರವನ್ನು ಮಲಿನಗೊಳಿಸುತ್ತವೆ. ಜಿರಳೆಯ ತ್ಯಾಜ್ಯ ಹಾಗೂ ಜೊಲ್ಲಿನಲ್ಲಿ ಬ್ಯಾಕ್ಟೀರಿಯಾ ಇರುತ್ತವೆ. ಇದರಿಂದ ಫುಡ್ ಪಾಯಿಸನಿಂಗ್, ಬೇಧಿ ಮತ್ತು ಇತರ ಹೊಟ್ಟೆ ಸಂಬಂಧಿ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಜಿರಳೆಗಳು ತಮ್ಮ ಕಾಲಿನಲ್ಲಿ ಸಾಲ್ಮೊನೆಲ್ಲಾವನ್ನು ಹೊತ್ತೊಯ್ದು ಆಹಾರದ ಮೇಲೆ ಬಿಡುತ್ತವೆ. ಇಂತಹ ಆಹಾರವನ್ನು ಸೇವಿಸಿದರೆ ಫುಡ್ ಪಾಯಿಸನಿಂಗ್ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಲಾಲ್ ಹಿಟ್ ಉಪಯೋಗಕ್ಕೆ ಬರುತ್ತದೆ. ಇದು ಆಳವಾದ ಚುಂಚನ್ನು ಹೊಂದಿದ್ದು, ಸಿಲಿಂಡರ್, ಸಿಂಕ್, ಬಿರುಕುಗಳು ಮತ್ತು ಸಂದುಗಳಲ್ಲಿ ಅಡಗಿಕೊಂಡಿರುವ ಜಿರಳೆಯನ್ನು ಹೊಡೆದೋಡಿಸುತ್ತದೆ. ಸಾಮಾನ್ಯ ಸ್ವಚ್ಛತೆಯಿಂದ ಇದನ್ನು ಮಾಡಲಾಗದು. ಕಳೆದ ಹಲವು ವರ್ಷಗಳಿಂದ ನನಗೆ ಅರಿವಿಗೆ ಬಂದಿರುವ ವಿಷಯವೆಂದರೆ ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಉತ್ತಮ. ಅಡುಗೆ ಮನೆ ಸ್ವಚ್ಛತೆ ಎಂದರೆ ಕೇವಲ ಒರೆಸುವುದು ಮಾತ್ರವಲ್ಲ. ಕಾಲಕಾಲಕ್ಕೆ ಡೀಪ್ ಕ್ಲೀನಿಂಗ್ ಕೂಡ ಮಾಡಬೇಕು . ಲಾಲ್ ಹಿಟ್‌ನ ಈಗಿನ ಹೊಸ ಸುಗಂಧ ಚೆನ್ನಾಗಿಲ್ಲವೇ ? ಈಗ ನನ್ನ ಮನೆಯಲ್ಲಿ ಯಾವ ಕೀಟವೂ ಇಲ್ಲ. ನೀವು ಹೀಗೆ ಮಾಡುತ್ತೀರಲ್ವಾ ?
ಈ ದಸರಾ #SayNoMoreFoodPoisoning ಎಂದು ಹೇಳೋ ಸಮಯ.
ದಸರಾ ಎಂದರೆ ದುಷ್ಟಶಕ್ತಿಗಳ ವಿರುದ್ಧ ಹೋರಾಡಿ ಜಯ ಸಾಧಿಸುವುದು ಹಾಗೂ ಸಂಭ್ರಮಾಚರಣೆ ಮಾಡುವುದಾಗಿದೆ. ಈಗ ನಾವು ನಮ್ಮ ಶತ್ರು ಜಿರಳೆಗಳ ವಿರುದ್ಧ ಜಯ ಸಾಧಿಸಿದ್ದೇವೆ. ಈಗ ಒಂದಷ್ಟು ಡೆಸರ್ಟ್‌ಗಳನ್ನು ಮಾಡಿ ಸಂಭ್ರಮಾಚರಣೆ ಮಾಡುವ ಸಮಯ. ಇಂದು ನಾನು ಅತ್ಯಂತ ಸರಳವಾದ ಹಾಗೂ ರುಚಿಕರವಾದ ನೇಂದ್ರ ಬಾಳೆ ಹಣ್ಣು ಜಾಮೂನು ರೆಸಿಪಿಯನ್ನು ವಿವರಿಸಲಿದ್ದೇನೆ. ಡೀಪ್ ಫ್ರೈ/ ಮಾಡಿದ ಕಳಿತ ನೇಂದ್ರ ಬಾಳೆಹಣ್ಣಿನ ತುಂಡುಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿ ತಿನ್ನುವ ವಿಶಿಷ್ಟ ತಿನಿಸು ಇದು. ಇದಕ್ಕೆ ಜಾಮೂನು ಎಂದು ಹೆಸರಿಟ್ಟರೂ, ನೋಡುವುದಕ್ಕೆ ಜಾಮೂನಿಗಿಂತ ವಿಭಿನ್ನವಾಗಿದೆ. ಆದರೆ ರುಚಿಯ ವಿಚಾರದಲ್ಲಿ ಸಮಾನವಾಗಿದೆ. ಒಮ್ಮೆ ಯಾಕೆ ನೀವು ಪ್ರಯತ್ನಿಸಬಾರದು? ನಿಮಗೆ ನಿಜವಾಗಿಯೂ ಇಷ್ಟವಾಗುತ್ತದೆ ಎಂದು ನಾನು ಭಾವಿಸಿದ್ದೇನೆ.
ಇಲ್ಲಿದೆ ನೋಡಿ ರೆಸಿಪಿ:
ಬೇಕಾಗುವ ಸಾಮಗ್ರಿಗಳು:
ಕಳಿತ ನೇಂದ್ರ ಬಾಳೆ ಹಣ್ಣು – 2 (ಇದು ಸರಿಯಾಗಿ ಕಳಿತಿರಬೇಕು)
ತುಪ್ಪ – ಡೀಪ್ ಫ್ರೈ ಮಾಡಲು
ಸಕ್ಕರೆ – ಅರ್ಧ ಕಪ್
ಕೇಸರಿ ಎಲೆಗಳು – ಒಂದು ಚಿಟಿಕೆ
ಏಲಕ್ಕಿ – 2, ಜಜ್ಜಿರುವುದು
ಮಾಡುವ ವಿಧಾನ:
- ನೇಂದ್ರ ಬಾಳೆ ಹಣ್ಣನ್ನು ಸುಲಿಯಿರಿ ಮತ್ತು ವೃತ್ತಾಕಾರದ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ
- ಎರಡೂ ಕಡೆಗಳಲ್ಲಿ ಚಿನ್ನದ ಬಣ್ಣ ಬರುವ ತನಕವೂ ಶಾಲೋ ಅಥವಾ ಡೀಪ್ ಫ್ರೈ ಮಾಡಿ. ಫ್ರೈ ಮಾಡಿದ ಮೇಲೆ ಟಿಶ್ಯೂ ಪೇಪರ್‌ನಲ್ಲಿ ಒಣಗಿಸಿ.
- ಈಗ ಆಳವಾದ ಒಂದು ಪಾನ್ ತೆಗೆದುಕೊಳ್ಳಿ. ಅದಕ್ಕೆ ಸಕ್ಕರೆ ಮತ್ತು ¼ cup ನೀರು ಹಾಕಿ. ಸಕ್ಕರೆ ಕರಗಲು ಹಾಗೂ ನೀರು ಕುದಿಯಲಿ. ಪಾಕ ಸ್ವಲ್ಪ ದಪ್ಪವಾಗುತ್ತಿದ್ದಂತೆಯೇ ಸ್ವಿಚ್ ಆಫ್ ಮಾಡಿ ಮತ್ತು ಕೇಸರಿ ಎಳೆಗಳು ಹಾಗೂ ಏಲಕ್ಕಿ ಹಾಕಿ.
- ಫ್ರೈ ಮಾಡಿದ ಬಾಳೆಹಣ್ಣಿನ ತುಂಡುಗಳನ್ನು ಹಾಕಿ ಮತ್ತು 1-2 ಗಂಟೆಗಳವರೆಗೆ ಹಾಗೆಯೇ ಬಿಡಿ. ಇದು ಸಕ್ಕರೆ ಪಾಕವನ್ನು ಸರಿಯಾಗಿ ಹೀರಿಕೊಳ್ಳಲಿ.
- ಸಿಹಿಯಾದ ಹಾಗೂ ಸ್ವಾದಭರಿತ ನೇಂದ್ರ ಬಾಳೆಹಣ್ಣು ಜಾಮೂನು ತಯಾರಾಗಿದೆ.
ಹಬ್ಬದ ಖುಷಿಯನ್ನು ಅನುಭವಿಸಿ. ಹಾಗೆಯೇ ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯಬೇಡಿ. ಈಗಲೇ ಸ್ವಚ್ಛತಾ ಅಭಿಯಾನ ಶುರು ಮಾಡಿ. ಲಾಲ್ ಹಿಟ್ ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ !!
No Comments