ಮಧ್ಯಮ ಪ್ರಮಾಣದ ಬೆಂಕಿಯಲ್ಲಿ 3-4 ನಿಮಿಷಗಳವರೆಗೆ ಹೆಸರು ಬೇಳೆಯನ್ನು ಹುರಿಯಿರಿ. ಬೇಳೆಯು ಸುವಾಸನೆ ಬರುವವರೆಗೆ ಹುರಿಯಿರಿ. ಗೋಧಿ ಕಡಿ ಹಾಕಿ ಮತ್ತು 2-3 ನಿಮಿಷಗಳವರೆಗೆ ಹುರಿಯಿರಿ.
ನೀರು ಮತ್ತು ಹಾಲನ್ನು ಸೇರಿಸಿ. ಪ್ರೆಷರ್ ಕುಕರ್ನಲ್ಲಿ 5-6 ವಿಸಲ್ ಹೊಡೆಯಲಿ.
ಪ್ರೆಶರ್ ಇಳಿದ ನಂತರ, ಕುಕರ್ ತೆರೆಯಿರಿ ಮತ್ತು ಬೇಳೆಯನ್ನು ಮ್ಯಾಶ್ ಮಾಡಿ. ಪಕ್ಕಕ್ಕೆ ಇಟ್ಟುಕೊಳ್ಳಿ.
ದಪ್ಪನೆಯ ತಳ ಹೊಂದಿರುವ ಕಡಾಯಿಯಲ್ಲಿ, ಒಂದು ಚಮಚ ತುಪ್ಪ ಮತ್ತು ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹಾಕಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ಪಕ್ಕಕ್ಕೆ ಇಟ್ಟುಕೊಳ್ಳಿ
ಅದೇ ಪಾತ್ರೆಗೆ ಬೆಲ್ಲ ಮತ್ತು ನೀರನ್ನು ಸೇರಿಸಿ (ಬೆಲ್ಲಕ್ಕೆ ಸಾಕಷ್ಟೇ ನೀರು ಇರಲಿ). ಬೆಲ್ಲ ಕರಗಲು ಆಗಾಗ್ಗೆ ಸ್ವಲ್ಪ ತಿರುಗಿಸಿ. ಬೆಲ್ಲ ಕರಗಿದಾಗ ಅದನ್ನು ಶೋಧಿಸಿ. ಮತ್ತೆ ಒಲೆಯ ಮೇಲೆ ಇಟ್ಟು ಕುದಿಸಿ.
ಮಾಶ್ ಮಾಡಿದ ದಾಲಿಯಾ ಮತ್ತು ದಾಲ್ ಮಿಕ್ಸ್ ಅನ್ನು ಬೆಲ್ಲದ ಪಾಕಕ್ಕೆ ಸೇರಿಸಿ. ಗಂಟು ಇಲ್ಲದಂತೆ ಚೆನ್ನಾಗಿ ಮಿಶ್ರಣಗೊಳಿಸಿ. ಬೆಲ್ಲದ ಪಾಕವನ್ನು ದಾಲಿಯಾ ಹೀರಿಕೊಳ್ಳಲು ಸ್ವಲ್ಪ ಸಮಯ ನೀಡಿ.
ಮಿಶ್ರಣ ದಪ್ಪಗಾದ ನಂತರ, ತುಪ್ಪ, ಹುರಿದ ಗೋಡಂಬಿ ಮತ್ತು ದ್ರಾಕ್ಷಿ, ಏಲಕ್ಕಿ ಪೌಡರ್, ಪಚ್ಚ ಕರ್ಪೂರ ಹಾಗೂ ಕೊಬ್ಬರಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. 2-3 ನಿಮಿಷಗಳವರೆಗೆ ತಿರುಗಿಸಿ. ಇದರಿಂದ ಪೊಂಗಲ್ನಲ್ಲಿ ತುಪ್ಪ ಸರಿಯಾಗಿ ಮಿಶ್ರಣವಾಗುತ್ತದೆ ಮತ್ತು ದಪ್ಪನೆಯ ಕ್ರೀಮ್ನಂತಾಗುತ್ತದೆ.ಒಲೆ ಬೆಂಕಿ ನಂದಿಸಿ.
ಈಗ ನಿಮಗೆ ರುಚಿಕರವಾದ ಗೋಧಿ ಕಡಿ ಸಕ್ಕರೆ ಪೊಂಗಲ್ ನೈವೇದ್ಯಕ್ಕೆ ರೆಡಿಯಾಗಿದೆ.