PRODUCT REVIEW

ಕೆಂಪು ಹಿಟ್‌ ಮತ್ತು ಗೋಧಿ ರವೆ ದಾಲಿಯಾ ರೆಸಿಪಿಯೊಂದಿಗೆ #SayNoToFoodPoisoning !!

SWEET DALIA PONGAL

ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಂಕ್ರಾಂತಿ ಎಂಬುದು ಬೆಳೆಯನ್ನು ಕೀಳುವ ಸಮಯದಲ್ಲಿ ಮಾಡುವ ಹಬ್ಬವಾಗಿದ್ದು, ಪ್ರತಿ ರಾಜ್ಯದಲ್ಲೂ ವಿಭಿನ್ನವಾಗಿ ಆಚರಿಸಲಾಗುತ್ತದೆ. ಬಾಗಿಲ ಎದುರು ಬಣ್ಣದ ಬಣ್ಣದ ರಂಗೋಲಿಗಳು, ಆಕಾಶದಲ್ಲಿ ಆಕರ್ಷಕ ಗಾಳಿಪಟಗಳು, ಅಲಂಕಾರಗೊಂಡ ಜಾನುವಾರಗಳು ಮತ್ತು ವಿವಿಧ ರುಚಿಕರವಾದ ತಿನಿಸಿಗಳು ಈ ದಿನವನ್ನು ಇನ್ನಷ್ಟು ವರ್ಣರಂಜಿತವಾಗಿಸುತ್ತವೆ. ಕರ್ನಾಕಟದಲ್ಲಿ ಕಬ್ಬು ಹಾಗೂ ಬಾಳೆಹಣ್ಣಿನ ಜತೆಗೆ ಎಳ್ಳು ಬೆಲ್ಲಮತ್ತು ಸಕ್ಕರೆ ಅಚ್ಚನ್ನು ಸ್ನೇಹಿತರು ಹಾಗೂ ಸಂಬಂಧಿಗಳಿಗೆ ಸಂಕ್ರಾಂತಿಯ ಸಂದರ್ಭದಲ್ಲಿ ಹಂಚಲಾಗುತ್ತದೆ. ಈ ಹಬ್ಬವನ್ನು 3 ದಿನಗಳವರೆಗೆ ಆಚರಿಸಲಾಗುತ್ತದೆ. ಪ್ರತಿ ದಿನಕ್ಕೂ ತನ್ನದೇ ಆದ ವಿಶೇಷತೆಗಳಿರುತ್ತವೆ.

ಸಂಕ್ರಾಂತಿಯ ಸಂಭ್ರಮ ಆರಂಭವಾಗಲು ಇನ್ನೇನು ಕೆಲವೇ ದಿನಗಳಿವೆ. ನಾನು ಈಗಾಗಲೇ ಶಾಪಿಂಗ್‌, ಸಿಹಿ ತಿನಿಸು ತಯಾರಿಕೆ ಇತ್ಯಾದಿ ಆರಂಭಿಸಿದ್ದೇನೆ. ಆದರೆ ಅದೆಲ್ಲಕ್ಕೂ ಮೊದಲು, ಮನೆಯನ್ನು ಆಳವಾಗಿ ಸ್ವಚ್ಛಗೊಳಿಸಬೇಕಿದೆ. ಕಾಲಕಾಲಕ್ಕೆ ನಾನು ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರೂ, ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಸ್ವಚ್ಛತೆ ಮಾಡಬೇಕಿರುತ್ತದೆ. ಮನೆಯ ಮೂಲೆ ಮೂಲೆಯನ್ನೂ ಸ್ವಚ್ಛಗೊಳಿಸುವುದರ ಜತೆಗೆ ಅಡುಗೆ ಮನೆಯನ್ನು ಆಳವಾಗಿ ಸ್ವಚ್ಛಗೊಳಿಸಬೇಕಿರುತ್ತದೆ. ಸಾಮಾನ್ಯವಾಗಿ ನಾನು ಅಡುಗೆ ಮನೆಯನ್ನು ಶುಚಿಯಾಗಿ ಇಟ್ಟಿರುತ್ತೇನೆ. ಇದಕ್ಕೆ ನನಗೆ ನೆರವಾಗುವುದು ಲಾಲ್‌ ಹಿಟ್. ಲಾಲ್‌ ಹಿಟ್‌ಗೆ ಧನ್ಯವಾದಗಳು!!!

ನೀವು ಆರೋಗ್ಯಕರ ಜೀವನವನ್ನು ನಡೆಸಬೇಕೆಂದಾದರೆ ಶುಚಿತ್ವ ಮತ್ತು ನೈರ್ಮಲ್ಯ ಅತ್ಯಂತ ಅಗತ್ಯ. ನಮ್ಮ ಮನೆಯನ್ನು ಸ್ವಚ್ಛವಾಗಿ ಹಾಗೂ ಕೀಟಗಳಿಂದ ಮುಕ್ತವಾಗಿ ಇಡುವುದು ಹೇಗೆಂದು ತಿಳಿದರೆ ಕಷ್ಟದ ಕೆಲಸವೇನೂ ಅಲ್ಲ. ನನಗಂತೂ ಜಿರಲೆಗಳು ತುಂಬಾ ಕಿರಿಕಿರಿ ಮಾಡುತ್ತವೆ. ಅಡುಗೆ ಮನೆಯ ಕ್ಯಾಬಿನೆಟ್‌ಗಳು, ನೀರು ಹೊರಹೋಗುವ ಸ್ಥಳಗಳು ಹಾಗೂ ಆಹಾರ ಸಾಮಗ್ರಿಗಳ ಬಳಿ ಜಿರಲೆಗಳು ಓಡಾಡುವುದನ್ನು ಊಹಿಸಿಕೊಳ್ಳಲೂ ಆಗದು. ನಾವು ಅಡುಗೆ ಮನೆಯನ್ನು ಎಷ್ಟೇ ನೀಟಾಗಿ ನಿರ್ವಹಿಸಿದರೂ, ಜಿರಲೆಗಳು ಹೇಗಾದರೂ ತೂರಿಕೊಳ್ಳುತ್ತವೆ. ಸಿಲಿಂಡರ್‌, ಸಿಂಕ್, ಬಿರುಕುಗಳು ಮತ್ತು ಸಂದಿಗಳ ಅಡಿಯಲ್ಲಿ ಜಿರಲೆಗಳು ಸೇರಿಕೊಳ್ಳುತ್ತವೆ.

ಅವು ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹೊತ್ತು ತಂದು ಆಹಾರ ಮತ್ತು ಪಾತ್ರೆಗಳ ಮೇಲೆ ಚೆಲ್ಲುತ್ತವೆ ಮತ್ತು ಆಹಾರವನ್ನು ಮಲಿನಗೊಳಿಸಿ ಫುಡ್‌ ಪಾಯಿಸನಿಂಗ್‌, ಟೈಫಾಯ್ಡ್‌, ಕಾಲರಾ, ಬೇಧಿ, ಡಯರಿಯಾ ಮತ್ತು ಇತರ ಜಠರ ಸಂಬಂಧಿ ರೋಗಗಳನ್ನು ಹರಡುತ್ತವೆ. ಚಿಕಿತ್ಸೆಗಿಂತಲೂ ಮುನ್ನೆಚ್ಚರಿಕೆಯೇ ಉತ್ತಮ ಎಂಬುದು ನನ್ನ ಅನುಭವ. ಅಡುಗೆ ಮನೆ ಶುಚಿಗೊಳಿಸುವುದು ಎಂದರೆ ಬರಿ ನೆಲದ ಕಸಗುಡಿಸುವುದು ಮತ್ತು ಒರೆಸುವುದಷ್ಟೇ ಅಲ್ಲ. ಆಗಾಗ್ಗೆ ಆಳ ಸ್ವಚ್ಛತೆ ಅತ್ಯಂತ ಅಗತ್ಯದ್ದಾಗಿದೆ. ಅಡುಗೆ ಮನೆಯಲ್ಲಿ ಅಡಗಿಕೊಂಡಿರುವ ಜಿರಲೆಗಳನ್ನು ನಿವಾರಿಸುವುದು ಅತ್ಯಂತ ಅಗತ್ಯ. ಇದಕ್ಕೆ ಕೆಂಪು ಹಿಟ್‌ಗೆ ನಾವು ವಂದನೆ ಹೇಳಬೇಕು. ನಾನು ಈ ಯಾವ ಸಮಸ್ಯೆಯನ್ನೂ ಎದುರಿಸಲಿಲ್ಲ. ಹೀಗಾಗಿ ನಾನು ಖುಷಿಯಿಂದ #SayNoToFoodPoisoning ಎಂದು ಹೇಳಬಹುದು!

ಪ್ರತಿ ಬಾರಿ ನಾನು ಅಡುಗೆ ಮನೆ ಸ್ವಚ್ಛಗೊಳಿಸುವಾಗಳು ನಾನು ಕೆಂಪು ಹಿಟ್‌ ಅನ್ನೇ ಎಲ್ಲ ಮೂಲೆಗಳಿಗೂ ಬಳಸುತ್ತೇನೆ. ಇದರಲ್ಲಿರುವ ಡೀಪ್ ರೀಚ್‌ ನಾಜಲ್‌ ಎಲ್ಲ ಜಿರಲೆಗಳನ್ನೂ ಸಾಯಿಸುತ್ತದೆ. ಸಾಮಾನ್ಯ ಸ್ವಚ್ಛತೆಯಿಂದ ಇದು ಸಾಧ್ಯವಾಗುವುದಿಲ್ಲ. ಡೀಪ್ ರೀಚ್‌ ನಾಜಲ್‌ ಬಳಸಿ ನಾವು ಸಿಂಕ್, ನೀರು ಹೊರಹೋಗುವ ಸ್ಥಳ, ಬಾಗಿಲಿನ ಅಂಚುಗಳು ಮತ್ತು ಇತರ ಸಣ್ಣ ಪ್ರದೇಶಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ. ಇನ್ನೂ ಖುಷಿಯ ಸಂಗತಿಯೆಂದರೆ, ಈಗ ಕೆಂಪು ಹಿಟ್‌ ಹೊಸ ಸುವಾಸನೆಯಲ್ಲೂ ಲಭ್ಯವಿದೆ. ಅದ್ಭುತವಲ್ಲವೇ? ಇನ್ನು ಕೆಂಪು ಹಿಟ್ ಬಳಸಿದ ನಂತರ ಅಡುಗೆಮನೆಯಲ್ಲಿ ದುರ್ಗಂಧ ಇರುವುದಿಲ್ಲ. ನನ್ನ ಮನೆ ಕೀಟಮುಕ್ತವಾಗಿದೆ. ನೀವೂ ತಯಾರಾಗಿದ್ದೀರಾ? ಈ ಹಬ್ಬದ ಸಂದರ್ಭದಲ್ಲಿ #SayNoMoreFoodPoisoning .

ಸಿಹಿತಿನಿಸುಗಳಿಲ್ಲದೇ ಹಬ್ಬಕ್ಕೆ ಪರಿಪೂರ್ಣತೆಯೇ ಇಲ್ಲ. ದಕ್ಷಿಣ ಭಾರತದಲ್ಲಿ ಪೊಂಗಲ್ (ಸಿಹಿ ಮತ್ತು ಖಾರ) ಪ್ರಮುಖ ಹಬ್ಬದ ತಿನಿಸು. ಇದನ್ನು ಸಾಮಾನ್ಯವಾಗಿ ಎಲ್ಲ ಮನೆಗಳಲ್ಲೂ ನೈವೇದ್ಯಕ್ಕೆ ತಯಾರಿಸಲಾಗುತ್ತದೆ. ಇಂದು ಅತ್ಯಂತ ಆರೋಗ್ಯಕರ ಹಾಗೂ ರುಚಿಕರವಾದ ಗೋಧಿ ಕಡಿಯ ಸಿಹಿ ಪೊಂಗಲ್‌ ರೆಸಿಪಿಯನ್ನು ನಾನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ಅಕ್ಕಿಯ ಪೊಂಗಲ್‌ ರೀತಿಯೇ ಇರುತ್ತದೆ. ಆದರೆ ಅಕ್ಕಿಯ ಬದಲಿಗೆ ನಾವು ಗೋಧಿ ಕಡಿಯನ್ನು ಬಳಸುತ್ತೇವೆ.  ಒಮ್ಮೆ ಪ್ರಯತ್ನಿಸಿ… ನೀವು ಇದನ್ನು ಇಷ್ಟಪಡುತ್ತೀರಿ ಎಂದು ನನಗೆ ಖಚಿತವಿದೆ. ಇಲ್ಲಿದೆ ರೆಸಿಪಿ : 

BROKEN WHEAT SWEET PONGAL recipe

ಹಬ್ಬವನ್ನು ಸಂಭ್ರಮಿಸಿ ಹಾಗೂ ಆರೋಗ್ಯವೇ ಭಾಗ್ಯ ಎಂಬುದನ್ನು ನೆನಪಿಡಿ. ಈಗಲೇ ಸ್ವಚ್ಛತೆ ಕಾರ್ಯ ಆರಂಭಿಸಿ. ಚಿಂತಿಸಬೇಡಿ, ಕೆಂಪು ಹಿಟ್‌ ನಿಮ್ಮ ಈ ಕೆಲಸವನ್ನು ಸುಲಭವಾಗಿಸುತ್ತದೆ!



SWEET DALIA PONGAL

ಕೆಂಪು ಹಿಟ್‌ ಮತ್ತು ಗೋಧಿ ರವೆ ದಾಲಿಯಾ ರೆಸಿಪಿಯೊಂದಿಗೆ #SayNoToFoodPoisoning !!

Smitha Kalluraya
Course Dessert
Cuisine south indian

Ingredients
 

  • 1 ಕಪ್ ಗೋಧಿ ಕಡಿ
  • 1/4 ಕಪ್ ಹೆಸರು ಬೇಳೆ
  • 3 ಕಪ್ ನೀರು
  • 1 ಕಪ್ ಹಾಲು
  • 3/4 ಕಪ್ ಬೆಲ್ಲ
  • 1-3 ಚಮಚ ತುಪ್ಪ
  • 2-3 ಚಮಚ ತೆಂಗಿನ ತುರಿ/ಕೊಬ್ಬರಿ
  • 2 ಏಲಕ್ಕಿ ಪೌಡರ್‌
  • 1/10 ಚಮಚ ಪಚ್ಚ ಕರ್ಪೂರ
  • ಗೋಡಂಬಿ ,ಒಣದ್ರಾಕ್ಷಿ

Instructions
 

  • ಮಧ್ಯಮ ಪ್ರಮಾಣದ ಬೆಂಕಿಯಲ್ಲಿ 3-4 ನಿಮಿಷಗಳವರೆಗೆ ಹೆಸರು ಬೇಳೆಯನ್ನು ಹುರಿಯಿರಿ. ಬೇಳೆಯು ಸುವಾಸನೆ ಬರುವವರೆಗೆ ಹುರಿಯಿರಿ. ಗೋಧಿ ಕಡಿ ಹಾಕಿ ಮತ್ತು 2-3 ನಿಮಿಷಗಳವರೆಗೆ ಹುರಿಯಿರಿ.
  • ನೀರು ಮತ್ತು ಹಾಲನ್ನು ಸೇರಿಸಿ. ಪ್ರೆಷರ್‌ ಕುಕರ್‌ನಲ್ಲಿ 5-6 ವಿಸಲ್‌ ಹೊಡೆಯಲಿ.
  • ಪ್ರೆಶರ್‌ ಇಳಿದ ನಂತರ, ಕುಕರ್‌ ತೆರೆಯಿರಿ ಮತ್ತು ಬೇಳೆಯನ್ನು ಮ್ಯಾಶ್‌ ಮಾಡಿ. ಪಕ್ಕಕ್ಕೆ ಇಟ್ಟುಕೊಳ್ಳಿ.
  • ದಪ್ಪನೆಯ ತಳ ಹೊಂದಿರುವ ಕಡಾಯಿಯಲ್ಲಿ, ಒಂದು ಚಮಚ ತುಪ್ಪ ಮತ್ತು ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹಾಕಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ಪಕ್ಕಕ್ಕೆ ಇಟ್ಟುಕೊಳ್ಳಿ
  • ಅದೇ ಪಾತ್ರೆಗೆ ಬೆಲ್ಲ ಮತ್ತು ನೀರನ್ನು ಸೇರಿಸಿ (ಬೆಲ್ಲಕ್ಕೆ ಸಾಕಷ್ಟೇ ನೀರು ಇರಲಿ). ಬೆಲ್ಲ ಕರಗಲು ಆಗಾಗ್ಗೆ ಸ್ವಲ್ಪ ತಿರುಗಿಸಿ. ಬೆಲ್ಲ ಕರಗಿದಾಗ ಅದನ್ನು ಶೋಧಿಸಿ. ಮತ್ತೆ ಒಲೆಯ ಮೇಲೆ ಇಟ್ಟು ಕುದಿಸಿ.
  • ಮಾಶ್‌ ಮಾಡಿದ ದಾಲಿಯಾ ಮತ್ತು ದಾಲ್‌ ಮಿಕ್ಸ್‌ ಅನ್ನು ಬೆಲ್ಲದ ಪಾಕಕ್ಕೆ ಸೇರಿಸಿ. ಗಂಟು ಇಲ್ಲದಂತೆ ಚೆನ್ನಾಗಿ ಮಿಶ್ರಣಗೊಳಿಸಿ. ಬೆಲ್ಲದ ಪಾಕವನ್ನು ದಾಲಿಯಾ ಹೀರಿಕೊಳ್ಳಲು ಸ್ವಲ್ಪ ಸಮಯ ನೀಡಿ.
  • ಮಿಶ್ರಣ ದಪ್ಪಗಾದ ನಂತರ, ತುಪ್ಪ, ಹುರಿದ ಗೋಡಂಬಿ ಮತ್ತು ದ್ರಾಕ್ಷಿ, ಏಲಕ್ಕಿ ಪೌಡರ್‌, ಪಚ್ಚ ಕರ್ಪೂರ ಹಾಗೂ ಕೊಬ್ಬರಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. 2-3 ನಿಮಿಷಗಳವರೆಗೆ ತಿರುಗಿಸಿ. ಇದರಿಂದ ಪೊಂಗಲ್‌ನಲ್ಲಿ ತುಪ್ಪ ಸರಿಯಾಗಿ ಮಿಶ್ರಣವಾಗುತ್ತದೆ ಮತ್ತು ದಪ್ಪನೆಯ ಕ್ರೀಮ್‌ನಂತಾಗುತ್ತದೆ.ಒಲೆ ಬೆಂಕಿ ನಂದಿಸಿ.
  • ಈಗ ನಿಮಗೆ ರುಚಿಕರವಾದ ಗೋಧಿ ಕಡಿ ಸಕ್ಕರೆ ಪೊಂಗಲ್‌ ನೈವೇದ್ಯಕ್ಕೆ ರೆಡಿಯಾಗಿದೆ.
    SWEET DALIA PONGAL

You Might Also Like

1 Comment

  • Reply
    Nabanita Dhar
    January 4, 2018 at 11:28 am

    I used hit myself in my constant fight with cockroaches 🙂

    And the dish looks yummy!

  • Leave a Reply

    Recipe Rating